ಮನೆಯಿಂದಲೇ ಕೆಲಸದಡಿಯಲ್ಲಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡ ಬಗ್ಗೆ 400 ಪದಗಳ ಒಂದು ಕಿರು ಲೇಖನ. ಕೋವಿಡ್ 19 ಇರುವ ಈ ಸಂದರ್ಭದಲ್ಲಿ ಮನೆಯಲ್ಲಿದ್ದರೂ ಕೂಡ ಪ್ರತಿದಿನವೂ ಆನ್ಲೈನ್ ನಲ್ಲಿ ನಡೆಯುವ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಗಳು ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿವೆ. ಪ್ರಪ್ರಥಮವಾಗಿ ಕಲ್ಯಾಣ ಕರ್ನಾಟಕದಲ್ಲಿ ಗುರು ಚೈತನ್ಯ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಯು ಹುಸೇನ್ ವಡಗೇರಿ ಅವರ ನೇತೃತ್ವ ಹಾಗೂ MRP ತಂಡದವರ ಸಹಯೋಗದಲ್ಲಿ ನಡೆಯುತ್ತಿರುವ ಈ ಮಾಲಿಕೆಯಲ್ಲಿ ಪ್ರತಿದಿನವೂ ನಲಿಕಲಿಯಲ್ಲಿ 'ಸಾಧನೆ ಮಾಡಿದ ಸಾಧಕರ ಪರಿಚಯ' ಅವರು ಮಾಡಿದ ನಾವಿನ್ಯಯುತ ಕಲಿಕೋಪಕರಣಗಳು, ತರಗತಿ ನಿರ್ವಹಣಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಸದಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ರೀತಿ, ತಮ್ಮ ಪಯಣದಲ್ಲಿ ಆದ ವಿಶಿಷ್ಟ ಅನುಭವದ ವಿಚಾರಗಳು. ಮತ್ತು ಪ್ರತಿನಿತ್ಯವೂ ಶ್ಲಾಘನೀಯ ಉಪನ್ಯಾಸಗಳಾದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ, HKRDB ವತಿಯಿಂದ ಕಲ್ಯಾಣ ಕರ್ನಾಟಕ ಜಿಲ್ಲೆಯಲ್ಲಿ ನಲಿಕಲಿ ಉನ್ನತಿಗಾಗಿ ಕೈಗೊಂಡ ಯೋಜನೆಗಳು, ಮಗುವಿನ ಕಲಿಕೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ನಲಿಕಲಿಯಲ್ಲಿ ನಾವಿನ್ಯತೆ ಕಲಿಕೋಪಕರಣಗಳ ತಯಾರಿಕೆ, ಶಿಕ್ಷಕ ಶಿಲ್ಪಿ, ನನ್ನ ಶಾಲೆ ನನ್ನ ಕನಸು, ಸಾಮಾನ್ಯ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳು, ಕಲಿಕೆಯ ' ಕ್ರಿಯಾಶೀಲ ತಾಣ...