ಅಸೈನ್ಮೆಂಟ್ -09

ಮನೆಯಿಂದಲೇ ಕೆಲಸದಡಿಯಲ್ಲಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡ ಬಗ್ಗೆ 400 ಪದಗಳ ಒಂದು ಕಿರು ಲೇಖನ.

ಕೋವಿಡ್ 19 ಇರುವ ಈ ಸಂದರ್ಭದಲ್ಲಿ ಮನೆಯಲ್ಲಿದ್ದರೂ ಕೂಡ ಪ್ರತಿದಿನವೂ ಆನ್ಲೈನ್ ನಲ್ಲಿ ನಡೆಯುವ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಗಳು ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿವೆ. ಪ್ರಪ್ರಥಮವಾಗಿ ಕಲ್ಯಾಣ ಕರ್ನಾಟಕದಲ್ಲಿ ಗುರು ಚೈತನ್ಯ ವಿಡಿಯೋ ಕಾನ್ಫೆರೆನ್ಸ್ ಮಾಲಿಕೆಯು ಹುಸೇನ್ ವಡಗೇರಿ ಅವರ ನೇತೃತ್ವ ಹಾಗೂ MRP ತಂಡದವರ ಸಹಯೋಗದಲ್ಲಿ ನಡೆಯುತ್ತಿರುವ ಈ ಮಾಲಿಕೆಯಲ್ಲಿ ಪ್ರತಿದಿನವೂ ನಲಿಕಲಿಯಲ್ಲಿ 'ಸಾಧನೆ ಮಾಡಿದ ಸಾಧಕರ ಪರಿಚಯ'  ಅವರು ಮಾಡಿದ ನಾವಿನ್ಯಯುತ ಕಲಿಕೋಪಕರಣಗಳು, ತರಗತಿ ನಿರ್ವಹಣಾ ಪ್ರಕ್ರಿಯೆಯಲ್ಲಿ ಮಕ್ಕಳನ್ನು ಸದಾ ಕಲಿಕಾ  ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ರೀತಿ, ತಮ್ಮ ಪಯಣದಲ್ಲಿ ಆದ ವಿಶಿಷ್ಟ ಅನುಭವದ ವಿಚಾರಗಳು. ಮತ್ತು ಪ್ರತಿನಿತ್ಯವೂ ಶ್ಲಾಘನೀಯ ಉಪನ್ಯಾಸಗಳಾದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ, HKRDB ವತಿಯಿಂದ ಕಲ್ಯಾಣ ಕರ್ನಾಟಕ ಜಿಲ್ಲೆಯಲ್ಲಿ ನಲಿಕಲಿ ಉನ್ನತಿಗಾಗಿ ಕೈಗೊಂಡ ಯೋಜನೆಗಳು, ಮಗುವಿನ ಕಲಿಕೆಯಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ, ನಲಿಕಲಿಯಲ್ಲಿ ನಾವಿನ್ಯತೆ ಕಲಿಕೋಪಕರಣಗಳ ತಯಾರಿಕೆ, ಶಿಕ್ಷಕ ಶಿಲ್ಪಿ, ನನ್ನ ಶಾಲೆ ನನ್ನ ಕನಸು, ಸಾಮಾನ್ಯ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳು, ಕಲಿಕೆಯ 'ಕ್ರಿಯಾಶೀಲ ತಾಣ' ಶಾಲೆ, ಶಾಲಾಭಿವೃದ್ಧಿಯಲ್ಲಿ ಭಾಗಿದಾರರು ಪಾತ್ರ, ಹಸಿರು ಪಠ್ಯಕ್ರಮ, ವಿದ್ಯಾರ್ಥಿಗಳಲ್ಲಿ  ಆಸಕ್ತಿಮೂಡಿಸಲು ಶಿಕ್ಷಕರ ಪಾತ್ರ, ಆ  ಶಿಕ್ಷಣದ ಶಕ್ತಿ, ಶಾಲಾ ನಾಯಕತ್ವ, ಆರಂಭಿಕ ಭಾಷಾ ಶಿಕ್ಷಣ, ಕಲಿಕಾ ಸ್ನೇಹಿ, ಮಗು ಭೂಮಿ ಮೇಲೆ ಅರಳುವ ಪುಷ್ಪ, ಬ್ಯಾಗ್ ರಹಿತ ಶಾಲಾ ದಿನ, ರಂಗಕಲೆ ಶಿಕ್ಷಣ, ಸಂಬಂಧಗಳು, ವಚನ ಸಾಹಿತ್ಯದಲ್ಲಿ ಶಿಕ್ಷಣ ಮತ್ತು ಶಿಕ್ಷಕ, ವ್ಯಾಕರಣದ ಮಹತ್ವ , ತರಗತಿ ನಿರ್ವಹಣೆ ಯಲ್ಲಿ ಶಿಕ್ಷಕರ ಸಿದ್ಧತೆ, ಗುಣಾತ್ಮಕ ಕಲಿಕೆಯಲ್ಲಿ ಶಿಕ್ಷಕ,  ವಿದ್ಯಾರ್ಥಿ ಮತ್ತು ಪೋಷಕರ ಪಾತ್ರ, ಶಿಕ್ಷಣದಲ್ಲಿ ಗ್ರಂಥಾಲಯದ ಮಹತ್ವ, ಕಲಿ- ಕಲಿಸು, ಮನೆ ಮಗುವಿನ ಮನ ಅರಳಿಸಲಿ, ಮನಸ್ಸಿನ ಬಗೆಗೆ ಮನಸ್ಸಿನಳದ ಮಾತುಗಳು, 'ಮನುಷ್ಯ ಬದುಕುವುದು ನನಗಾಗಿ  ಅಲ್ಲ ನಮಗಾಗಿ', ಕಲಿಕೆಗೆ ಪೂರಕ ಚಟುವಟಿಕೆ, ಅಕ್ಷರ ಯಾತ್ರೆಯ ಅನುಭವ, ಭಾಷಾ ಬೋಧನೆಯ ಉದ್ದೇಶಗಳು, ನಲಿಕಲಿಯಲ್ಲಿ ತಂತ್ರಜ್ಞಾನ ಅಳವಡಿಕೆ  ಈ ರೀತಿಯಾಗಿ ಪ್ರತಿದಿನವೂ ಒಂದಲ್ಲಾ ಒಂದು ರೀತಿಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲಾಯಿತು. ಇದರ ಜೊತೆಗೆ MRP ತಂಡದವರು ನಲಿ-ಕಲಿಗೆ ಸಂಬಂಧಿಸಿದಂತೆ ಯಾವ ತರಗತಿಗೆ, ಯಾವ ವಿಷಯಕ್ಕೆ, ಯಾವ ಮೈಲಿಗಲ್ಲಿಗೆ, ಯಾವ ಸಾಮರ್ಥ್ಯ ಇರುತ್ತದೆಯೋ  ಆ ಸಾಮರ್ಥ್ಯ ಆಧಾರಿತವಾಗಿ ಚಟುವಟಿಕೆಯನ್ನು ಗುಂಪುಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾ ಸುಮಕಾರರು ತೊಡಗಿಕೊಳ್ಳುವ ಬಗ್ಗೆ ಅತ್ಯದ್ಭುತ ರೀತಿಯಲ್ಲಿ ಚರ್ಚೆಯನ್ನು ಮಾಡುವುದರಿಂದ ಮುಂದೆ ಶಾಲೆ ಪ್ರಾರಂಭವಾದ ನಂತರ  ತರಗತಿ ನಿರ್ವಹಣೆ ಮಾಡಲು ಸಹಾಯಕವಾಗಿದೆ . 
ಶ್ರೀ ಶರಣು ಹೆಬ್ಬಳ್ಳಿ ಸರ್ ಅವರು ನಲಿ-ಕಲಿ ಶಿಕ್ಷಕರಿಗಾಗಿ ಅತ್ಯದ್ಭುತ ರೀತಿಯಲ್ಲಿ ನೀಡುತ್ತಿರುವ ಬೇಸಿಕ್ ಕಂಪ್ಯೂಟರ್ ತರಬೇತಿಯಲ್ಲಿ wordpad, notepad, paint, MS office, PowerPoint blogger create ಇತ್ಯಾದಿ ವಿಷಯಗಳ ಬಗ್ಗೆ ಪ್ರತಿದಿನವೂ ತಿಳಿದುಕೊಳ್ಳುವ ಸದಾವಕಾಶ.

'ಸರ್ವಜ್ಞನೆಂಬುವನು ಗರ್ವದಿಂದಾದವನೆ ?ಸರ್ವರೊಳಗೊಂದು ನುಡಿಗಲಿತು
 ವಿದ್ಯೆಯ ಪರ್ವತವೇ ಆದ ಸರ್ವಜ್ಞ 

ಎಲ್ಲ ಉಪನ್ಯಾಸಗಳಿಂದ ಮತ್ತು ನಲಿ-ಕಲಿ ಚರ್ಚೆಯಿಂದ ಹೊಸತರವಾದ ಕಲಿಕೆ.

ತಾಲೂಕು ಮಟ್ಟದಲ್ಲಿ onlineಮೂಲಕ ನಡೆದ ನಲಿ-ಕಲಿ ತರಬೇತಿಗಳನ್ನು ನೀಡಲು ಅನೇಕ ವಿಷಯಗಳನ್ನು ಕಲೆ ಹಾಕುವುದರ ಮೂಲಕ, ENK ತರಬೇತಿಯನ್ನು ನೀಡುವ ಮತ್ತು ಕೇಳುವ ಮೂಲಕ, ಹಾಗೂ online ನಡೆದ ಮುಖ್ಯಗುರುಗಳ ತರಬೇತಿಯಲ್ಲಿ ಮುಖ್ಯ ಗುರುಗಳ ಜವಾಬ್ದಾರಿ, ಸಮುದಾಯದಲ್ಲಿ ಭಾಗೀದಾರರ ಸಹಭಾಗಿತ್ವ, ಕಲಿಕೋಪಕರಣಗಳ ಬಳಕೆ, SATS ನಿರ್ವಹಣೆ, MDM ನಿರ್ವಹಣೆ, ದಾಖಲೆಗಳ ನಿರ್ವಹಣೆ, OOSC ಮಕ್ಕಳ ನಿರ್ವಹಣೆ, ಗ್ರಂಥಾಲಯದ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿದುಕೊಳ್ಳಲಾಯಿತು.

ಮುಖ್ಯವಾಗಿ ತಂತ್ರಜ್ಞಾನದ ಅಳವಡಿಕೆಯ ಬಗ್ಗೆ
 'ಆಡು ಮುಟ್ಟದ ಸೊಪ್ಪಿಲ್ಲ ತಂತ್ರಜ್ಞಾನದವಿರದ ಕ್ಷೇತ್ರವಿಲ್ಲ'ಎನ್ನುವ ಹಾಗೆ ಮೊಬೈಲ್ ನಲ್ಲಿ   App ಗಳನ್ನು ಡೌನ್ ಲೋಡ್ ಮಾಡಿಕೊಂಡು ಅವುಗಳ ಮುಖಾಂತರ ತರಬೇತಿಗಳಲ್ಲಿ Join ಆಗುವುದು.

 'Work from home' ಅಡಿಯಲ್ಲಿ ನೀಡಿದ ಅಸೈನ್ಮೆಂಟ್ ಗಳನ್ನು Blogger create ಮಾಡಿಕೊಂಡು ಅದರಲ್ಲಿ post  ಮಾಡುವ ರೀತಿ, Authors invite ಮಾಡಿಕೊಳ್ಳುವ ಬಗ್ಗೆ, ಈ ರೀತಿಯಾಗಿ ತಂತ್ರಜ್ಞಾನ ಅಳವಡಿಕೆ ಮಾಡಿಕೊಂಡು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಹ ಶಿಕ್ಷಣ ಇಲಾಖೆ ಹಾಗೂ ಅಪರ ಆಯುಕ್ತರ ಕಾರ್ಯಾಲಯ ಅಧಿಕಾರಿ ವೃಂದವರೆಲ್ಲರಿಗೂ ಹೃತ್ಪೂರ್ವಕವಾದ ಅಭಿನಂದನೆಗಳು.

ಕೆಲವಂ ಬಲ್ಲವರಿಂದ ಕಲ್ತು
ಕೆಲವಂ  ಮಳ್ವರಿಂದ ಕಂಡು ಮತ್ತೆ
ಹಲವಂ ತಾನೇ ಸ್ವತಃ ಮಾಡಿ ತಿಳಿದ ಸರ್ವಜ್ಞ

ಕೆಲವೊಂದನ್ನು ಬಲ್ಲವರಿಂದ ಮತ್ತೆ  ಕೆಲವೊಂದನ್ನು ಮಾಡುವವರಿಂದ ಕಲಿತು ಕೆಲವುಗಳನ್ನು ತಾನೇ ಸ್ವತಃ ಮಾಡುವುದರ ಮೂಲಕ ನನ್ನ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.

ನಾವಿನ್ಯಯುತವಾದ ಹವಾಮಾನ ನಕ್ಷೆ


ಈ ರೀತಿಯಾಗಿ ಕೋವಿಡ್-19  ವಿಷಮ ಪರಿಸ್ಥಿತಿಯಲ್ಲಿಯೂ ಕೂಡ ಸಮಯವನ್ನು ಸದುಪಯೋಗ ಮಾಡಿಕೊಳ್ಳುತ್ತಾ ಆನ್ಲೈನ್ ತರಬೇತಿಗಳಲ್ಲಿ ಭಾಗವಹಿಸಿ ವಿಚಾರ ವಿನಿಮಯ ಚಿಂತನ-ಮಂಥನಗಳು ಮೂಲಕ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.


ಶಿಕ್ಷಕರ ಹೆಸರು: ಶ್ರೀಮತಿ ನಿರ್ಮಲಾ ಸಿ ಎಸ್
                        ಮುಖ್ಯಗುರುಗಳು
                        ಸ.ಹಿ.ಪ್ರಾ.ಶಾಲೆ. ಕುಂದನೂರ
                        

Comments