ಅಸೈನ್ಮೆಂಟ್ - 10 ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳಲು ಸಲಹೆ- ಮತ್ತು ಕಾರ್ಯತಂತ್ರಗಳ ಪಟ್ಟಿ.



ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಕೊಳ್ಳುವಲ್ಲಿ (ಅದರಲ್ಲೂ ಮಕ್ಕಳು ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ಸಲಹೆ  ಮತ್ತು ಅಳವಡಿಸಿಕೊಂಡಿರುವ ಕಾರ್ಯತಂತ್ರಗಳ ಬಗ್ಗೆ ಮಾಹಿತಿ.



ವಚನ
ಕಂಡು ಕಂಡುದನೆಲ್ಲವ ಕೊಂಡು
ಅಟ್ಟಹಾಸದಿ ಮೆರೆವ ಜನಕೆ
ಕಾಣದ ಜೀವಿಯು ಬಂದು
ತಲ್ಲಣಿಸುವುದು ಜಗವು ನೋಡಾ-ಗುಹೇಶ್ವರ
                                 ಅಲ್ಲಮಪ್ರಭು

12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಈ ವಚನದಲ್ಲಿ ಹೇಳಿದ ಹಾಗೆ ಕಾಣದ ಜೀವಿಯಾದ ಕೋವಿಡ್ -19 ವೈರಸ್ ಸೋಂಕು  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಶಾಲಾ ಮಕ್ಕಳಿಗೆ ರಜೆಯನ್ನು ನೀಡಿದರೂ ಕೂಡ ಶಿಕ್ಷಣ ಇಲಾಖೆಯ ಆದೇಶದಂತೆ ಮಕ್ಕಳು ಮನೆಯಲ್ಲಿಯೇ ಕುಳಿತು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಲು ಅನೇಕ ಸಲಹೆ ಮತ್ತು ಕಾರ್ಯತಂತ್ರಗಳನ್ನು ರೂಪಿಸಿ ಅವುಗಳ ಮೂಲಕ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಸಲಹೆ ಮತ್ತು ಕಾರ್ಯತಂತ್ರಗಳು ಪಟ್ಟಿ

  • ಮಕ್ಕಳಿಗೆ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು.
  • ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು.
  • ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಬಗ್ಗೆ ಅರಿವು ಮೂಡಿಸುವುದು.
  • ಸೋಪಿನಿಂದ ಹಾಗಾಗ್ಗೆ ಕೈತೊಳೆಯುವಂತೆ ತಿಳಿಸುವುದು. 
  • ಸ್ಯಾನಿಟೈಸರ್ ಬಳಕೆಯನ್ನು ಮಾಡುವುದರ ಬಗ್ಗೆ ಅರಿವು ಮೂಡಿಸುವುದು.
  • ಮನೆಯಲ್ಲಿ ಕುಳಿತು ಅಭ್ಯಾಸ ಮಾಡುವುದರ ಬಗ್ಗೆ ತಿಳಿಸುವುದು.
  • ಮನೆಮದ್ದುಗಳಾದ ತುಳಸಿ, ಅಜವಾನ(ದೊಡ್ಡಪತ್ರೆ), ಹಸಿಶುಂಠಿ, ಬೆಳ್ಳುಳ್ಳಿ, ಅಡಿಗೆ ಅರಿಶಿನ, ಇತ್ಯಾದಿಗಳನ್ನು ಬಳಕೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಕೊರೋನ ಸೋಂಕು ತಗುಲದಂತೆ ಮುಂಜಾಗ್ರತೆ ವಹಿಸುವುದರ ಬಗ್ಗೆ ಅರಿವು ಮೂಡಿಸುವುದು.
  • ನೆಗಡಿ, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ವೈದ್ಯರನ್ನು ತಕ್ಷಣ ಸಂಪರ್ಕಿಸುವುದರ ಬಗ್ಗೆ ತಿಳಿಸುವುದು.
  • ಬೇರೆ ಊರಿಗೆ ಹೋಗದೇ ಮನೆಯಲ್ಲಿ ಇರುವುದರ ಬಗ್ಗೆ ಅರಿವು ಮೂಡಿಸುವುದು.
  • ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸದೆ ಇರುವ ಬಗ್ಗೆ ತಿಳಿಸುವುದು.
  • ಹಿಂದಿನ ವರ್ಷ ಕಲಿತ ವಿಷಯ ಅಂಶಗಳ ಪುನರ್ಮನನ ಮಾಡಿಕೊಳ್ಳುವಂತೆ ತಿಳಿಸುವುದು.
  • ತಮ್ಮ ತರಗತಿಗೆ ಸಂಬಂಧಪಟ್ಟಂತೆ ಪಠ್ಯಪುಸ್ತಕಗಳ ಸಂಗ್ರಹಣೆ ಮಾಡಿಕೊಳ್ಳುವಂತೆ ತಿಳಿಸುವುದು.
  • ಮೂಲಕ್ಷರಗಳು, ಒತ್ತಕ್ಷರಗಳು, ಗುಣಿತಾಕ್ಷರಗಳು, ಅಂಕಿ-ಸಂಖ್ಯೆಗಳು, ಮಗ್ಗಿಗಳು ಇತ್ಯಾದಿ ಅಂಶಗಳನ್ನು ಮನೆಯಲ್ಲಿಯೇ ಕುಳಿತು ಬರೆಯುವುದು ಮತ್ತು ಓದುವುದರ ಬಗ್ಗೆ ತಿಳಿಸುವುದು.
  • ಸಣ್ಣ ಸಣ್ಣ ಕಥೆಗಳು ಮತ್ತು ಇತರೆ ಪುಸ್ತಕಗಳನ್ನು ಓದುವಂತೆ ಮಕ್ಕಳಿಗೆ ಪ್ರೇರೇಪಿಸುವುದು.
  • ಶುದ್ಧ ಬರಹ ಮತ್ತು ಸ್ಪಷ್ಟ ಓದುವುದರ ಬಗ್ಗೆ ಕಲ್ಪನೆ ಮೂಡಿಸುವುದು.
  • ಶಿಕ್ಷಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನೋಡುವಂತೆ ತಿಳಿಸುವುದು.
  • ಎಂಟನೇ ತರಗತಿ ಮಕ್ಕಳಿಗೆ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸೇತುಬಂಧಕ್ಕೆ ಸಂಬಂಧಿಸಿದ ವಿಷಯವನ್ನು ವೀಕ್ಷಣೆ ಮಾಡುವಂತೆ ಮತ್ತೆ ಅದನ್ನು ನೋಟ್  ಮಾಡಿಕೊಳ್ಳುವಂತೆ ತಿಳಿಸುವುದು. 
  • ಪಾಠಗಳನ್ನು ಓದಿದ ನಂತರ ಗೊತ್ತಾಗದ ವಿಷಯದ ಬಗ್ಗೆ ಪ್ರಶ್ನೆಗಳನ್ನು ಬರೆದಿಟ್ಟು ಕೊಳ್ಳುವಂತೆ ತಿಳಿಸುವುದು.
ವಠಾರ ಶಾಲೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ಮಕ್ಕಳನ್ನು ಸಾಮಾಜಿಕ ಅಂತರದಲ್ಲಿ ಕೊಡಿಸಿ ಕೊರೋನಾ ಮುಂಜಾಗ್ರತಾ ಕ್ರಮಗಳು ಮತ್ತು ಕಲಿಕೆಯಲ್ಲಿ ಯಾವ ರೀತಿ ತೊಡಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುವುದು.

ಕೋವಿಡ್-19 ಜೊತೆ ಜೊತೆಯಲ್ಲಿಯೇ ನಾವು ಬದುಕ ಬೇಕಾಗಿರೋದು ಅನಿವಾರ್ಯವಾಗಿದೆ. 
        'ಪರಿವರ್ತನೆ ಜಗದ ನಿಯಮ'
ಕಾಲಕಾಲಕ್ಕೆ ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದು ಬಹಳ ಅನಿವಾರ್ಯವಾದ ವಿಷಯವಾಗಿದೆ.

ಶಿಕ್ಷಣ ನಿಂತ ನೀರಾಗದೆ ಸದಾ ಕ್ರಿಯಾಶೀಲತೆಯಿಂದ ಹರಿದಾಗ ಮಾತ್ರ ಕಲಿಕೆ ಉತ್ಕೃಷ್ಟ ಗೊಂಡು 'ಗುಣಾತ್ಮಕ ಶಿಕ್ಷಣದ' ಗುರಿ ಮುಟ್ಟಲು ಸಾಧ್ಯವಾಗುತ್ತದೆ.
ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ.ಮಾಡಬೇಕು ಎನ್ನುವ ಮನಸ್ಸಿರಬೇಕು.
               
                   'ಮನಸಿದ್ದರೆ ಮಾರ್ಗ'

ಶಿಕ್ಷಕರ ಹೆಸರು : ಶ್ರೀಮತಿ ನಿರ್ಮಲಾ ಸಿ ಎಸ್
                         ಮುಖ್ಯಗುರುಗಳು
                         ಸ.ಹಿ.ಪ್ರಾ.ಶಾಲೆ. ಕುಂದನೂರ




Comments